ಥೀಮ್ ಪ್ರಕಾರ ಕಾನೂನು ವಿವರಣೆ
ನ್ಯಾಯಾ ಅವರ ಸರಳವಾದ, ಕಾರ್ಯಸಾಧ್ಯವಾದ, ವಿಶ್ವಾಸಾರ್ಹ ಮತ್ತು ಪ್ರವೇಶಿಸಬಹುದಾದ ಕಾನೂನು ಮಾಹಿತಿಯೊಂದಿಗೆ ಕಾನೂನು ವಿವರಣೆಗಳ ಭಂಡಾರವನ್ನು ಒಂಬತ್ತು ವಿಶಾಲ ಥೀಮ್‌ಗಳಾಗಿ ವಿಂಗಡಿಸಲಾಗಿದೆ. ನಿಮಗೆ ಆಸಕ್ತಿಯಿರುವ ವಿಷಯಗಳ ಕುರಿತು ನೀವು ಸುಲಭವಾಗಿ ವಿವರಣೆಯನ್ನು ಕಾಣಬಹುದು. ಪ್ರತಿಯೊಂದು ವಿವರಣೆಯು ಆ ವಿಷಯದ ಬಗ್ಗೆ ಕಾನೂನು ಮತ್ತು ನಿಮಗೆ ಲಭ್ಯವಿರುವ ಪರಿಹಾರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬಳಕೆದಾರರ ಪ್ರಕಾರ ವಿಂಗಡಿಸಲಾದ ಕಾನೂನು ಸಂಪನ್ಮೂಲಗಳು
ನಿಮ್ಮ ದೃಷ್ಟಿಕೋನದಿಂದ ‘ನ್ಯಾಯ’ದ ವಿವರಣೆಗಳು, ಮಾರ್ಗದರ್ಶಿಗಳು, ವೀಡಿಯೊಗಳು, ಮಾದರಿ ಫಾರ್ಮ್‌ಗಳು, ರಾಜ್ಯವಾರು ಮಾಹಿತಿಯನ್ನು ಅನ್ವೇಷಿಸಿ. ನಿಮ್ಮ ಬಳಕೆದಾರ- ಪ್ರಕಾರವನ್ನು ಗುರುತಿಸಿ; ನಿಮಗೆ ಆಸಕ್ತಿಯಿರುವ ವಿಷಯಗಳ ಕುರಿತು ನೀವು ಸುಲಭವಾಗಿ ವಿಷಯಗಳನ್ನು ಕಂಡುಕೊಳ್ಳಬಹುದು.
ನಮ್ಮ ಪ್ರಭಾವ
ನಾವು ತಂತ್ರಜ್ಞಾನ ಮತ್ತು ತಳಮಟ್ಟದ ಸಂಸ್ಥೆಗಳ ಸಹಯೋಗವನ್ನು ಬಳಸಿ, ಕಾನೂನು ಅರಿವಿನ ಕೊರತೆ, ವೆಚ್ಚ, ಸಾಕ್ಷರತೆ, ಭಾಷೆ ಮತ್ತು ಸಂಕೀರ್ಣತೆಯಂತಹ ಅಡೆತಡೆಗಳನ್ನು ನಿವಾರಿಸಿ, ನ್ಯಾಯವನ್ನು ಜನರ ಕೈಗೆಟಕಿಸಿ, ಅವರ ಹಕ್ಕುಗಳನ್ನು ಜಾರಿಗೊಳಿಸುವ ಅಧಿಕಾರ ನೀಡಲು ಪ್ರಯತ್ನಿಸುತ್ತೇವೆ.
ಇನ್ನಷ್ಟು ತಿಳಿಯಿರಿನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.
ನ್ಯಾಯ ಬಗ್ಗೆ
ಕಾನೂನು ವಿವರಣೆಗಳು ಮತ್ತು ಗೈಡ್ ಗಳು
ನಾವು ಸರಳ, ಅಧಿಕೃತ, ಸ್ಮರಿಸಿಕೊಳ್ಳಬಹುದಾದ, ಕಾರ್ಯಗತಗೊಳಿಸಬಹುದಾದ ಕಾನೂನು (SARAL) ಮಾಹಿತಿಯನ್ನು ಒದಗಿಸುತ್ತೇವೆ. ಇದರಿಂದ ನೀವು ನಿಮ್ಮ ಕಾನೂನು ಸಮಸ್ಯೆಗಳನ್ನು ಪರಿಹರಿಸಬಹುದು, ಕಾನೂನಿನ ಅಡಿಯಲ್ಲಿ ನಿಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಸಮಯ ಮತ್ತು ಹಣವನ್ನು ಉಳಿಸಬಹುದು.
ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ
ನೀವು ವಾಸಿಸುವ ಸ್ಥಳದಲ್ಲಿ ಪ್ರಾದೇಶಿಕ ಕಾನೂನುಗಳ ಕುರಿತು ನಾವು ನಿಮಗೆ ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ನೀವು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬಹುದು ಮತ್ತು ನಾಗರಿಕ-ಕೇಂದ್ರಿತ ಕಾನೂನುಗಳಿಗೆ ಬೇಡಿಕೆ ಸಲ್ಲಿಸಬಹುದು.
ಆಡಿಯೋ - ವಿಡಿಯೋ ಮಾಹಿತಿ
ನಾವು ಆಡಿಯೋ ಮತ್ತು ವೀಡಿಯೋ ಫಾರ್ಮ್ಯಾಟ್‌ಗಳಲ್ಲಿ ಸುಲಭವಾದ ಮತ್ತು ಪರಿಹಾರ-ಕೇಂದ್ರಿತ ಮಾಹಿತಿಯನ್ನು ತಯಾರಿಸುತ್ತಿದ್ದೇವೆ. ಇದರಿಂದ ಕ್ರಮಬದ್ಧವಾದ ಕಾನೂನು ಮಾಹಿತಿಯು ಎಲ್ಲರಿಗೂ ತಲುಪುತ್ತದೆ.