ಟ್ರಾಫಿಕ್ ಸಿಗ್ನಲ್ ಗಳು ಮತ್ತು ಚಿಹ್ನೆಗಳನ್ನು ಪಾಲಿಸದಿರುವುದು

ಕೊನೆಯ ಅಪ್ಡೇಟ್ Jun 30, 2022

ಟ್ರಾಫಿಕ್ ಸಿಗ್ನಲ್ ಗಳು

ವಾಹನವನ್ನು ಚಾಲನೆ ಮಾಡಲು ಅನುಮತಿ ಇದೆ ಅಥವಾ ಇಲ್ಲ ಎಂಬುದನ್ನು ಸೂಚಿಸುವ ಉದ್ದೇಶಕ್ಕಾಗಿ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿರುವ ಉಪಕರಣವನ್ನು, ಕಾನೂನಿನ ಪರಿಭಾಷೆಯಲ್ಲಿ ಟ್ರಾಫಿಕ್ ಲೈಟ್, ಟ್ರಾಫಿಕ್ ಸಿಗ್ನಲ್ ಅಥವಾ ಸ್ಟಾಪ್ ಲೈಟ್ ಎಂದು ಕರೆಯಲಾಗುತ್ತದೆ. ವಿಶ್ವದ ಎಲ್ಲೆಡೆ ಮಾನ್ಯವಾಗಿರುವ ಬಣ್ಣಗಳ ಸಂಕೇತದಲ್ಲಿ ಟ್ರಾಫಿಕ್ ಸಿಗ್ನಲ್ ಗಳು ಮಾಹಿತಿ ನೀಡುತ್ತವೆ.

 ಕೆಂಪು ದೀಪ: ವಾಹನವನ್ನು ನಿಲ್ಲಿಸಿರಿ
 ಹಳದಿ ದೀಪ: ವಾಹನದ ವೇಗವನ್ನು ಕಡಿಮೆ ಮಾಡಿರಿ/ವಾಹನ ಚಾಲನೆ ಮಾಡಲು ಸನ್ನದ್ಧರಾಗಿರಿ
 ಹಸಿರು ದೀಪ: ವಾಹನವನ್ನು ಚಲಾಯಿಸಿ.

ಟ್ರಾಫಿಕ್ ಸಿಗ್ನಲ್ ಗಳನ್ನು ಪಾಲನೆ ಮಾಡುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಟ್ರಾಫಿಕ್ ಸಿಗ್ನಲ್ ಗಳನ್ನು ನೀವು ಉಲ್ಲಂಘಿಸಿದಲ್ಲಿ ನಿಮಗೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ, ಕೂಡುರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಕೆಂಪು ದೀಪ ಇದ್ದರೂ ಸಹ ನೀವು ನಿಮ್ಮ ವಾಹನವನ್ನು ಚಲಾಯಿಸಲು ಪ್ರಾರಂಭಿಸಿದಲ್ಲಿ ಅಥವಾ ನಿಮ್ಮ ವಾಹನವನ್ನು ನಿಲ್ಲಿಸದಿದ್ದ ಪಕ್ಷದಲ್ಲಿ, ನಿಮಗೆ ದಂಡ ವಿಧಿಸಲಾಗುತ್ತದೆ.

ನೀವು ತೆತ್ತಬೇಕಾಗಿರುವ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ. ಆದರೂ ಸಹ ನೀವು ಕನಿಷ್ಟ ರೂ.500 ರಿಂದ ರೂ.1,000 ದ ವರೆಗೆ ಜುಲ್ಮಾನೆ ತೆರಬೇಕಾಗುವುದು.

ಎರಡು ರಾಜ್ಯಗಳಲ್ಲಿ ವಿಧಿಸಲಾಗುವ ಜುಲ್ಮಾನೆಯ ಮೊತ್ತವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ಜುಲ್ಮಾನೆಯ ಮೊತ್ತ (ರೂ.)
ದೆಹಲಿ 500-1,000
ಕರ್ನಾಟಕ 500-1,000

ಟ್ರಾಫಿಕ್ ಚಿಹ್ನೆಗಳು ಮತ್ತು ನಿರ್ದೇಶನಗಳು

ಟ್ರಾಫಿಕ್ ಚಿಹ್ನೆಗಳನ್ನು, ವಾಹನ ಚಾಲನೆಯ ನಿಬಂಧನೆಗಳನ್ನು ಮತ್ತು ಟ್ರಾಫಿಕ್ ಅಥವಾ ಪೋಲೀಸ್ ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಪಾಲಿಸುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.

ಟ್ರಾಫಿಕ್ ಚಿಹ್ನೆಗಳನ್ನು, ವಾಹನ ಚಾಲನೆಯ ನಿಬಂಧನೆಗಳನ್ನು ಅಥವಾ ಟ್ರಾಫಿಕ್ ಅಧಿಕಾರಿಯು ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿದಲ್ಲಿ, ನೀವು ಜುಲ್ಮಾನೆ ತೆರಬೇಕಾಗುತ್ತದೆ. ಉದಾಹರಣೆಗೆ, ಯು-ಟರ್ನ್ ನಿರ್ಭಂಧಿಸಿರುವ ಕೂಡುರಸ್ತೆಯಲ್ಲಿ ನೀವು ಯು-ಟರ್ನ್ ಮಾಡಿದಲ್ಲಿ, ನಿಮಗೆ ಜುಲ್ಮಾನೆ ವಿಧಿಸಬಹುದು.

ಟ್ರಾಫಿಕ್ ಚಿಹ್ನೆಗಳ ಸಂಪೂರ್ಣ ಪಟ್ಟಿ ಮತ್ತು ಅವುಗಳ ವಿವರಣೆಯನ್ನು ಮೋಟಾರು ವಾಹನ ಕಾಯ್ದೆ, 1988 ರ ಮೊದಲನೇ ಪರಿಚ್ಛೇದದಲ್ಲಿ ನೀಡಲಾಗಿದೆ. ಈ ಮಾಹಿತಿಯನ್ನು ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಪಡೆಯಬಹುದಾಗಿದೆ.

ನೀವು ತೆರಬೇಕಾಗುವ ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲೂ ಬೇರೆಯಾಗಿರಬಹುದು. ಆದರೆ. ಮೊದಲನೆಯ ಬಾರಿಯ ಅಪರಾಧಕ್ಕಾಗಿ ನೀವು ಕನಿಷ್ಟ ರೂ.500/- ದಂಡ ತೆರಬೇಕಾಗುವುದು ಮತ್ತು ನಂತರದ ಪುನರಾವರ್ತಿತ ಅಪರಾಧಗಳಿಗೆ ರೂ. 1,500/- ಜುಲ್ಮಾನೆ ತೆರಬೇಕಾಗುತ್ತದೆ. ಪ್ರತಿ ರಾಜ್ಯವೂ ಪ್ರತ್ಯೇಕ ಜುಲ್ಮಾನೆಯ ಮೊತ್ತವನ್ನು ನಿಗದಿಪಡಿಸಿರಬಹುದು.

ಎರಡು ರಾಜ್ಯಗಳಲ್ಲಿ ವಿಧಿಸುವ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ.

ರಾಜ್ಯ ಅಪರಾಧ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಟ್ರಾಫಿಕ್ ಚಿಹ್ನೆಗಳ

ಉಲ್ಲಂಘನೆ

ಮೊದಲ ಬಾರಿ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಟ್ರಾಫಿಕ್ ಚಿಹ್ನೆಗಳ

ಉಲ್ಲಂಘನೆ

ಮೊದಲ ಬಾರಿ 500
ಪುನರಾವರ್ತಿತ ಅಪರಾಧ 1,000

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.