ಮಹಿಳೆಯೊಬ್ಬರು ಬಳಸುತ್ತಿರುವ ಅಂತರ್ಜಾಲ ಇ-ಮೇಲ್ ಮತ್ತಾವುದೇ ರೀತಿಯ ವಿದ್ಯುನ್ಮಾನ ಸಂವಹನ ಸಾಮಾಜಿಕ ಜಾಲತಾಣಗಳು ಇವುಗಳ ಮೇಲೆ ಯಾವುದೇ ವ್ಯಕ್ತಿಯು ನಿಗಾ ವಹಿಸಿದ್ದಲ್ಲಿ, ಅದನ್ನು “ಅಂತರ್ಜಾಲ ಹಿಂಬಾಲಿಕೆ” (ಸೈಬರ್ ಸ್ಟಾಕಿಂಗ್) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬನು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಸಂಪರ್ಕಿಸುತ್ತಿದ್ದಲ್ಲಿ, ಆತ ನಿಮ್ಮನ್ನು ಅಂತರ್ಜಾಲದಲ್ಲಿ ಹಿಂಬಾಲಿಸುತಿದ್ದಾನೆ ಎಂದರ್ಥ. ಈ ಅಪರಾಧಕ್ಕಾಗಿ ಮೊದಲ ಬಾರಿ ತಪ್ಪಿತಸ್ಥನೆಂದು ಕಂಡುಬಂದಾಗ ಅಪರಾದಿಯು ಮೂರು ವರ್ಷಗಳ ಕಾರಾಗೃಹ ವಾಸ ಮತ್ತು ಜುಲ್ಮಾನೆ ತೆರುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಎರಡನೇ ಬಾರಿ ತಪ್ಪಿತಸ್ಥನೆಂದು ತೀರ್ಮಾನಿಸಿದಾಗ, ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು ದಂಡವನ್ನು ತೆರಬೇಕಾಗುತ್ತದೆ.