ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ನೀವು ಈ ಕೆಳಕಂಡ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು:
ಮೋಟಾರ್ ಸೈಕಲ್ ಚಲಿಸುವವರೂ ಸೇರಿದಂತೆ ಕೇವಲ ಇಬ್ಬರು ಮಾತ್ರ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡತಕ್ಕದ್ದು.
ಎರಡನೇ ವ್ಯಕ್ತಿಯು ಮೋಟಾರ್ ಸೈಕಲ್ಲಿಗೆ ಬಿಗಿಯಾಗಿ ಅಳವಡಿಸಲಾಗಿರುವ ಸೂಕ್ತ ಸೀಟಿನ ಮೇಲೆ ಕುಳಿತಿರತಕ್ಕದ್ದು.
ಈ ಮೇಲ್ಕಂಡ ಎರಡು ಷರತ್ತುಗಳನ್ನು ನೀವು ಉಲ್ಲಂಘಿಸಿದಲ್ಲಿ,
ನೀವು ಕನಿಷ್ಟ ರೂ. 1,000/- ಜುಲ್ಮಾನೆ ತೆರಬೇಕಾಗುವುದು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಮೊತ್ತವನ್ನು ಜುಲ್ಮಾನೆಯಾಗಿ ನಿಗದಿಪಡಿಸಿರಬಹುದು.
ಮೂರು ತಿಂಗಳ ಅವಧಿಗೆ ನೀವು ಚಾಲನಾ ಪರವಾನಗಿ ಹೊಂದದಂತೆ ನಿಮ್ಮನ್ನು ಅನರ್ಹಗೊಳಿಸಬಹುದು.
ರಾಜ್ಯ | ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ) |
ದೆಹಲಿ | 1,000/- |
ಕರ್ನಾಟಕ | 500/- |