ನೀವು ಮನೆಯನ್ನು ಬಾಡಿಗೆ ಪಡೆಯುವಾಗ ಅಥವಾ ಬಾಡಿಗೆ ನೀಡುವಾಗ ಈ ಕೆಳಕಂಡ ಕಾರಣಗಳಿಗಾಗಿ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತ.
ಬಾಡಿಗೆ, ದುರಸ್ತಿ, ಸೌಲಭ್ಯಗಳ ಕುರಿತು ಯಾವುದೇ ವಿವಾದ ಉದ್ಭವಿಸಿದಾಗ, ಒಪ್ಪಂದದಲ್ಲಿನ ಷರತ್ತುಗಳನ್ನು ಜಾರಿಗೊಳಿಸಬಹುದಾಗಿದೆ. ಇದು ನಿಮ್ಮ ನೆರವಿಗೆ ಬರುತ್ತದೆ.
ಪೋಲೀಸರಿಗೆ ದೂರನ್ನು ನೀಡಲು/ನ್ಯಾಯಾಲಯದ ಮೊರೆ ಹೋಗಲು ನೀವು ಲಿಖಿತ ದಾಖಲೆಯನ್ನು ಸಾಕ್ಷ್ಯಾಧಾರವಾಗಿ ನೀಡಬಹುದಾಗಿದೆ.
ಬಾಡಿಗೆದಾರ/ಪರವಾನಗಿ ಪಡೆದವರಾಗಿ ಈ ಒಪ್ಪಂದವನ್ನು ನಿಮ್ಮ ತಾತ್ಕಾಲಿಕ ವಿಳಾಸದ ದಾಖಲೆಯನ್ನಾಗಿ ಬಳಸಬಹುದಾಗಿದೆ.
ಮಾಲೀಕ/ಪರವಾನಗಿ ನೀಡಿದವರು ಅಥವಾ ಬಾಡಿಗೆದಾರ/ಪರವಾನಗಿ ಪಡೆದವರಾಗಿ ನಿಮ್ಮ ಹಕ್ಕು ಮತ್ತು ಕರ್ತವ್ಯಗಳು ನೀವು ಮಾಡಿಕೊಂಡಿರುವ ಬಾಡಿಗೆ ಒಪ್ಪಂದವನ್ನು ಅವಲಂಬಿಸುತ್ತವೆ. ಯಾವುದೇ ಸ್ವತ್ತನ್ನು ವಾಸೋಪಯೋಗಕ್ಕಾಗಿ ಬಾಡಿಗೆ ಪಡೆಯುವಾಗ ಎರಡು ವಿಧದ ಒಪ್ಪಂದಗಳನ್ನು ಮಾಡಿಕೊಳ್ಳಬಹುದಾಗಿದೆ.
ಭೋಗ್ಯದ ಒಪ್ಪಂದ ಅಥವಾ ಭೋಗ್ಯ ಪತ್ರ (ಸಾಮಾನ್ಯವಾಗಿ ಬಾಡಿಗೆ ಒಪ್ಪಂದ ಎಂದು ಕರೆಯಲಾಗುತ್ತದೆ)
ಅನುಮತಿ ಮತ್ತು ಪರವಾನಗಿ ಒಪ್ಪಂದ