ಅಂತರ್ಜಾಲದಲ್ಲಿ ನಿಮಗೆ ಅನಾಮಧೇಯ ಬೆದರಿಕೆಗಳು ಬಂದಲ್ಲಿ ಅಥವಾ ನಿಮ್ಮನ್ನು ಬ್ಲಾಕ್ ಮೇಲ್ ಮಾಡಿದಲ್ಲಿ, ನೀವು ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಬಹುದು. ಹೀಗೆ ದೂರು ದಾಖಲಿಸಲು ನಿಮಗೆ ತೊಂದರೆ ನೀಡುತ್ತಿರುವ ವ್ಯಕ್ತಿಯ ಕುರಿತು ನಿಖರ ಮಾಹಿತಿಯನ್ನು ನೀವು ಹೊಂದಿರಬೇಕಾಗಿಲ್ಲ. ನಿಮಗೆ ತಿಳಿದಿರುವ ಎಲ್ಲಾ ವಿಚಾರಗಳನ್ನು ಪೋಲೀಸರಿಗೆ ತಿಳಿಸಬೇಕೇ ವಿನ: ನೀವು ಸಕಲ ಮಾಹಿತಿಯನ್ನೂ ಹೊಂದಿರಬೇಕಾದ ಅವಶ್ಯಕತೆ ಇಲ್ಲ. ನಿಮಗೆ ಬೆದರಿಕೆ ಹಾಕುತ್ತಿರುವ ಅಥವಾ ನಿಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿರುವ ವ್ಯಕ್ತಿ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ಜುಲ್ಮಾನೆ ಅಥವಾ ಎರಡರಿಂದಲೂ ಶಿಕ್ಷಾರ್ಹನಾಗಿರುತ್ತಾನೆ.