ದೈಹಿಕ ಹಾನಿ ಉಂಟುಮಾಡುವುದಾಗಿ ಅಥವಾ ದೌರ್ಜನ್ಯ ಎಸಗುವುದಾಗಿ ಅಂತರ್ಜಾಲದದಲ್ಲಿ ಬೆದರಿಕೆ ಹಾಕುವುದು ಭಯ ಸೃಷ್ಟಿಸುವ ಕೃತ್ಯವಾಗಿದ್ದು, ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಫೇಸ್ ಬುಕ್ ನಲ್ಲಿ ಯಾವುದೇ ವ್ಯಕ್ತಿ ನಿಮ್ಮನ್ನು ಥಳಿಸುವುದಾಗಿ ಮೆಸೇಜ್ ಹಾಕಿದಲ್ಲಿ, ಆ ಕೃತ್ಯವನ್ನು ದೈಹಿಕವಾಗಿ ಘಾಸಿಗೊಳಿಸುವ ಬೆದರಿಕೆ ಎಂದು ಪರಿಗಣಿಸಲಾಗುತ್ತದೆ. ಈ ಬೆದರಿಕೆಗೆ ಸಂಬಂಧಿಸಿದಂತೆ ನೀವು ಸಕ್ಷಮ ಅಧಿಕಾರಿಗಳಿಗೆ ದೂರನ್ನು ನೀಡಬಹುದಾಗಿದೆ.
ಕಾನೂನಿನ ಪರಿಭಾಷೆಯಲ್ಲಿ ಈ ಕೃತ್ಯವನ್ನು “ಅಪರಾಧಿಕ ಭಯೋತ್ಪಾದನೆ” ಎಂದು ಕರೆಯಲಾಗುತ್ತದೆ. ಈ ಅಪರಾಧಕ್ಕಾಗಿ ಎರಡು ವರ್ಷಗಳವರೆಗಿನ ಕಾರಾಗೃಹ ವಾಸ ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳ ಶಿಕ್ಷೆ ನೀಡಲು ಅವಕಾಶವಿದೆ.