ಈ ಕೆಳಕಂಡ ಯಾವುದೇ ಅಪರಾಧ ಕುರಿತು ನೀವು ಮಾಹಿತಿ ನೀಡಬೇಕಿದ್ದಲ್ಲಿ, ಅಂತಹ ಮಾಹಿತಿಯನ್ನು ಮಹಿಳಾ ಪೋಲೀಸ್ ಅಧಿಕಾರಿ ಅಥವಾ ಬೇರಾವುದೇ ಮಹಿಳಾ ಅಧಿಕಾರಿ ದಾಖಲಿಸತಕ್ಕದ್ದು.
- ಆಸಿಡ್ ಬಳಕೆಯಿಂದ ತೀವ್ರ ಗಾಯ
 - ಸ್ವಯಂಪ್ರೇರಿತವಾಗಿ ಆಸಿಡ್ ಎರಚುವುದು ಅಥವಾ ಎರಚಲು
ಪ್ರಯತ್ನಿಸುವುದು - ಮಹಿಳೆಯ ಘನತೆಯನ್ನು ಭಂಗ ಮಾಡುವ ಉದ್ದೇಶದಿಂದ ಆಕೆಯ ಮೇಲೆ
ಹಲ್ಲೆ ಅಥವಾ ಬಲ ಪ್ರಯೋಗ. - ಲೈಂಗಿಕ ಕಿರುಕುಳ
 - ವಿವಸ್ತ್ರಗೊಳಿಸುವುದು
 - ವಿಕೃತ ಕಾಮುಕ ಪ್ರವೃತ್ತಿ
 - ಹಿಂಬಾಲಿಸುವುದು
 - ಅತ್ಯಾಚಾರ
 - ಅತ್ಯಾಚಾರದಿಂದ ಉಂಟಾದ ಮರಣ ಅಥವಾ ದೈಹಿಕ ನಿಷ್ಕ್ರಿಯತೆ
 - ದಂಪತಿಗಳು ಬೇರ್ಪಟ್ಟ ನಂತರದಲ್ಲಿ ಗಂಡನಿಂದ ಅತ್ಯಾಚಾರ
 - ಗ್ಯಾಂಗ್ ರೇಪ್
 - ಮಾತುಗಳಿಂದ, ಸಂಜ್ಞೆ ಅಥವಾ ಕ್ರಿಯೆಗಳಿಂದ ಮಹಿಳೆಯ ಘನತೆಗೆ ಭಂಗ
ತರುವುದು. 
ಮೇಲ್ಕಾಣಿಸಿದ ಅಪರಾಧಗಳ ಪೈಕಿ ಸಂ. 3 ರಿಂದ 11 ರವರೆಗಿನ ಅಪರಾಧಗಳನ್ನು ಮಾನಸಿಕ ಅಥವಾ ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಮೇಲೆ ಎಸಗಿದ್ದಲ್ಲಿ ಅಥವಾ ಎಸಗಿದ್ದಾರೆಂದು ಆರೋಪ ಮಾಡುತ್ತಿದ್ದಲ್ಲಿ, ಪೋಲೀಸ್ ಅಧಿಕಾರಿಯು ಅಂತಹ ಮಾಹಿತಿಯನ್ನು ನೀಡುತ್ತಿರುವ ವ್ಯಕ್ತಿಯ ಮನೆಯಲ್ಲಿ ಅಥವಾ ಆ ವ್ಯಕ್ತಿಗೆ ಅನುಕೂಲವಾದ ಸ್ಥಳದಲ್ಲಿ ದಾಖಲು ಮಾಡತಕ್ಕದ್ದು. ಸಂದರ್ಭಕ್ಕನುಸಾರವಾಗಿ ಅವರು ದುಭಾಷಿಯ ಅಥವಾ ವಿಶೇಷ ಶಿಕ್ಷಣ ಪರಿಣತರ ಸೇವೆಗಾಗಿ ಕೋರಿಕೆ ಮಾಡಬಹುದು.
