ನೀವು ಅಪರಾಧ ಕೃತ್ಯದಿಂದ ಪೀಡಿತರಾಗಿದ್ದಲ್ಲಿ
ಅಪರಾಧ ಕೃತ್ಯದಿಂದ ಪೀಡಿತನಾದ ವ್ಯಕ್ತಿಯ ಸಂಬಂಧಿಕ, ಮಿತ್ರ ಅಥವಾ ಪರಿಚಯಸ್ಥರು.
ಅಪರಾಧವೊಂದು ಜರುಗಿದೆ ಅಥವಾ ಜರುಗಲಿದೆ ಎಂದು ನಿಮಗೆ ಮಾಹಿತಿ ಇದ್ದಲ್ಲಿ ನೀವು ಎಫ್ಐಆರ್ ದಾಖಲಿಸಬಹುದು.
ಎಫ್ಐಆರ್ ದಾಖಲಿಸಲು ನಿಮಗೆ ಅಪರಾಧ ಕುರಿತು ಸಂಪೂರ್ಣ ಮಾಹಿತಿ ಇರಬೇಕಾದ ಅಗತ್ಯವಿಲ್ಲ. ಆದರೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ನೀವು ಪೋಲೀಸರ ಗಮನಕ್ಕೆ ತರುವುದು ಅತ್ಯಗತ್ಯ.
ಎಫ್ಐಆರ್ ಎಂದರೆ ಯಾವುದೇ ವ್ಯಕ್ತಿಯ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣ ಎಂದು ಅರ್ಥವಲ್ಲ. ದೋಷಾರೋಪಣ ಪಟ್ಟಿಯನ್ನು ಪೋಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿ ಮತ್ತು ಸರ್ಕಾರವು ಪ್ರಾಸಿಕ್ಯೂಟರ್ ರವನ್ನು ನೇಮಕಾತಿ ಮಾಡಿದ ನಂತರ ಕ್ರಿಮಿನಲ್ ಪ್ರಕರಣ ಆರಂಭವಾಗುತ್ತದೆ.