ಉಭಯ ಪಕ್ಷಗಾರರು ಜೀವಂತವಾಗಿರುವ ಗಂಡ/ಹೆಂಡತಿಯನ್ನು ಹೊಂದಿರಬಾರದು.
ಯಾವುದೇ ಪಕ್ಷಗಾರರು:
ಚಿತ್ತವಿಭ್ರಮಣೆಯ ಕಾರಣದಿಂದ ವಿವಾಹಕ್ಕೆ ವಿಧಿಬದ್ಧ ಒಪ್ಪಿಗೆ ಕೊಡಲು ಅಸಮರ್ಥರಾಗಿರಬಾರದು.
ವಿಧಿಬದ್ಧ ಒಪ್ಪಿಗೆ ಕೊಡಲು ಸಮರ್ಥರಿದ್ದರೂ ಸಹ, ವಿವಾಹ ಮಾಡಿಕೊಳ್ಳಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥರನ್ನಾಗಿ ಮಾಡಿರುವಂತಹ ಮಾನಸಿಕ ವ್ಯಾಧಿಯಿಂದ ನರಳುತ್ತಿರಕೂಡದು.
ಪದೇಪದೇ ಬುದ್ಧಿಭ್ರಮಣೆ ಅಥವಾ ಅಪಸ್ಮಾರದ ಆಘಾತಕ್ಕೆ ತುತ್ತಾಗಿರಬಾರದು.
ಪುರುಷರು ಕನಿಷ್ಟ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಮತ್ತು ಸ್ತ್ರೀಯರು ಕನಿಷ್ಟ 18 ವರ್ಷ ವಯೋಮಾನದವರಾಗಿರಬೇಕು.
ಉಭಯ ಪಕ್ಷಗಾರರು ನಿಷಿದ್ಧ ತಲೆಮಾರುಗಳಿಗೆ ಸೇರಿದವರಾಗಿರಬಾರದು.
ವಿವಾಹವಿಧಿಯನ್ನು ಶಾಸ್ತ್ರಬದ್ಧವಾಗಿ ನೆರವೇರಿಸಲು ಯಾವುದೇ ಬುಡಕಟ್ಟು, ಸಮುದಾಯ, ಗುಂಪು ಅಥವಾ ಕುಟುಂಬಕ್ಕೆ ಸೇರಿದ ವ್ಯಕ್ತಿಗಳಿಗೆ ವಿಶಿಷ್ಟವಾದ ಸಂಪ್ರದಾಯವಿದ್ದಲ್ಲಿ, ರಾಜ್ಯ ಸರ್ಕಾರವು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸತಕ್ಕದ್ದು. ಆದರೆ,
ಅಂತಹ ಸಂಪ್ರದಾಯಗಳನ್ನು ಸಮುದಾಯದ ಸದಸ್ಯರು ದೀರ್ಘಕಾಲದಿಂದ ನಿರಂತರವಾಗಿ ಆಚರಿಸುತ್ತಿದ್ದಲ್ಲಿ;
ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಸಾರ್ವಜನಿಕ ನೀತಿಗೆ ವಿರುದ್ಧವಾಗಿರದಿದ್ದಲ್ಲಿ;
ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಕೇವಲ ಕುಟುಂಬಕ್ಕೆ ಅನ್ವಯವಾಗುತ್ತಿದ್ದು, ಕುಟುಂಬವು ಆ ಆಚರಣೆಗಳನ್ನು ಪರಿಪಾಲಿಸುತ್ತಿದ್ದಲ್ಲಿ.
— ರಾಜ್ಯ ಸರ್ಕಾರವು ಅಂತಹ ನಿಯಮಾವಳಿಗಳನ್ನು ಪ್ರಕಟಿಸುವ ಅಗತ್ಯವಿಲ್ಲ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಸ್ತ್ರಬದ್ಧವಾಗಿ ನೆರವೇರಿದ ಪ್ರಕರಣಗಳಲ್ಲಿ, ಉಭಯ ಪಕ್ಷಗಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ಈ ಕಾನೂನು ಜಾರಿಯಲ್ಲಿರುವ ಪ್ರದೇಶಗಳಲ್ಲಿ ವಾಸಮಾಡುತ್ತಿಬೇಕು.