ವೇಗಮಿತಿಯನ್ನು ಉಲ್ಲಂಘಿಸುವುದು

ಕೊನೆಯ ಅಪ್ಡೇಟ್ Jun 30, 2022

ಯಾವುದೇ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ನಿಗದಿಪಡಿಸಿರುವ ವೇಗಮಿತಿಯನ್ನು ಉಲ್ಲಂಘಿಸುವುದು ಅಪರಾಧವಾಗುತ್ತದೆ. ಸಾಮಾನ್ಯವಾಗಿ ರಸ್ತೆ ಮತ್ತು ಬೀದಿಗಳಿಗೆ ನಿಗದಿಪಡಿಸಿರುವ ಗರಿಷ್ಟ ವೇಗಮಿತಿಯನ್ನು ಸೂಚಿಸುವ ಚಿಹ್ನೆಯನ್ನು ಹೊಂದಿರುವ ಫಲಕವನ್ನು ಆಯಾ ರಸ್ತೆ ಮತ್ತು ಬೀದಿಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಲಾಗಿರುತ್ತದೆ. ಉದಾಹರಣೆಗೆ, ಶಾಲಾ ವಲಯದಲ್ಲಿ ವೇಗಮಿತಿ ಘಂಟೆಗೆ 25 ಕಿ.ಮೀ ಇದ್ದು, ನೀವು 60 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡಿದಲ್ಲಿ ನೀವು ಅತಿವೇಗದ ಚಾಲನೆಗಾಗಿ ಶಿಕ್ಷಾರ್ಹರಾಗುತ್ತೀರಿ.

ವಿವಿಧ ಮಾದರಿಯ ಮೋಟಾರು ವಾಹನಗಳು ವೇಗಮಿತಿಯನ್ನು ಉಲ್ಲಂಘಿಸಿದಲ್ಲಿ ವಿಧಿಸುವ ಕನಿಷ್ಟ ದಂಡನೆಯನ್ನು ಈ ಕೆಳಗೆ ನೀಡಲಾಗಿದೆ.
 ಲಘು ಮೋಟಾರು ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿದ ಅಪರಾಧಕ್ಕಾಗಿ, ರೂ.1,000/- ದಿಂದ ರೂ.2,000/- ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕಾಗಿ ನಿಮ್ಮ ಚಾಲನಾ ಪರವಾನಗಿಯನ್ನು ಮಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
 ಮಧ್ಯಮ ಗಾತ್ರದ ಸರಕು ಸಾಗಣೆ ಮೋಟಾರು ವಾಹನ, ಪ್ರಯಾಣಿಕ ವಾಹನ, ಭಾರೀ ಗಾತ್ರದ ಸರಕು ಸಾಗಣೆ ಅಥವಾ ಪ್ರಯಾಣಿಕ ವಾಹನವನ್ನು ಅತಿವೇಗದಿಂದ ಚಾಲನೆ ಮಾಡಿದಲ್ಲಿ, ರೂ.2,000/- ದಿಂದ ರೂ.4,000/- ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕಾಗಿ ನಿಮ್ಮ ಚಾಲನಾ ಪರವಾನಗಿಯನ್ನು ಮಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಬಹುದು. ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ವಾಹನದ ಮಾದರಿ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಲಘು ಮೋಟಾರು ವಾಹನ 1,000-2,000
ಮಧ್ಯಮ/ಭಾರೀ ಗಾತ್ರದ ವಾಹನ 2,000-4,000
ಕರ್ನಾಟಕ ದ್ವಿಚಕ್ರ/ತ್ರಿಚಕ್ರ ಮತ್ತು ಲಘು ಮೋಟಾರು ವಾಹನಗಳು 1,000
ಮಧ್ಯಮ/ಭಾರೀ ಗಾತ್ರದ ವಾಹನ 2,000

 

ಭಾರತದಲ್ಲಿ ವಿವಿಧ ಮಾದರಿಯ ವಾಹನಗಳಿಗೆ ವಿವಿಧ ವರ್ಗದ ರಸ್ತೆಗಳಲ್ಲಿ ನಿಗದಿಪಡಿಸಿರುವ ವೇಗಮಿತಿ ಈ ಕೆಳಕಂಡಂತಿದೆ.

ಭಾರತದ ರಸ್ತೆಗಳಲ್ಲಿ ಗರಿಷ್ಟ ವೇಗಮಿತಿ (ಪ್ರತಿ ಘಂಟೆಗೆ, ಕಿಲೋಮೀಟರ್ ಗಳಲ್ಲಿ)

 

ಮೋಟಾರು ವಾಹನದ ಮಾದರಿ ಪ್ರವೇಶ ನಿಯಂತ್ರಣ ನ್ನು ಹೊಂದಿರುವ ಎಕ್ಸ್ ಪ್ರೆಸ್ ವೇ ನಾಲ್ಕು ಅಥವಾ ಹೆಚ್ಚಿನ ಪಥಗಳನ್ನು ಹೊಂದಿರುವ ಕ್ಯಾರೇಜ್ ವೇ (ಮೀಡಿಯನ್ / ಸ್ಟ್ರಿಪ್ /ಡಿವೈಡರ್ ಗಳನ್ನು ಹೊಂದಿರುವ ರಸ್ತೆ ಮುನಿಸಿಪಲ್ ವ್ಯಾಪ್ತಿಯಲ್ಲ ರುವ ರಸ್ತೆಗಳು ಇತರ ರಸ್ತೆಗಳು
ಚಾಲಕನ ಸೀಟನ್ನು ಹೊರತು ಪಡಿಸಿ ಗರಿಷ್ಟ 8 ಸೀಟುಗಳನ್ನು ಹೊಂದಿರುವ ಮೋಟಾರು ವಾಹನಗಳು. 120 100 70 70
ಚಾಲಕನ ಸೀಟು ಹೊರತು ಪಡಿಸಿ, ಒಂಭತ್ತು ಅಥವಾ ಹೆಚ್ಚಿನ ಸೀಟುಗಳನ್ನು ಹೊಂದಿರುವ ಮೋಟಾರು ವಾಹನಗಳು. 100 90 60 60
ಸರಕು ಸಾಗಾಣಿಕೆಗಾಗಿ ಬಳಸುವ ಮೋಟಾರು ವಾಹನಗಳು. 80 80 60 60
ಮೋಟಾರು ಸೈಕಲ್ ಗಳು 80 (ಎಕ್ಸ್ ಪ್ರೆಸ್ ವೇ ನಲ್ಲಿ ಚಾಲನೆ ಮಾಡಲು ಅನುಮತಿ ನೀಡಿದಲ್ಲಿ) 80 60 60
ನಾಲ್ಕು ಚಕ್ರದ ವಾಹನಗಳು 60 50 50
ಮೂರು ಚಕ್ರದ ವಾಹನಗಳು 50 50 50

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.