ಇದು ಸೇಡಿನ ಪೋರ್ನ್‌ನಂತಹ ಕೃತ್ಯಗಳನ್ನು ಒಳಗೊಂಡಿರುತ್ತದೆ ಮತ್ತು ಅಂತಹ ವ್ಯಕ್ತಿಯ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬಹುದು.

ನಿಮ್ಮ ವೈಯುಕ್ತಿಕ ಭಾವಚಿತ್ರಗಳು ಮತ್ತು ವಿಡಿಯೋಗಳು

ಕೊನೆಯ ಅಪ್ಡೇಟ್ Jun 30, 2022

ನಿಮ್ಮ ವೈಯುಕ್ತಿಕ ಭಾವಚಿತ್ರಗಳ ಮತ್ತು ವಿಡಿಯೋಗಳನ್ನು ನಿಮ್ಮ ಅನುಮತಿ ಇಲ್ಲದೆಯೇ ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ಗುಪ್ತಾಂಗದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಹಾಕಿದಲ್ಲಿ ಅದು ಆತನ ಖಾಸಗಿತನವನ್ನು ಉಲ್ಲಂಘಿಸಿದ ಅಪರಾಧವೆನಿಸಿಕೊಳ್ಳುತ್ತದೆ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಎರಡು ಲಕ್ಷ ರೂಪಾಯಿಗಳ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.

ಮಹಿಳೆಯೊಬ್ಬಳು ಖಾಸಗಿ ಕ್ರಿಯೆಗಳಲ್ಲಿ ತೊಡಗಿರುವ ಭಾವಚಿತ್ರಗಳನ್ನು ತೆಗೆಯುವುದು, ನೋಡುವುದು ಅಥವಾ ಹರಡುವುದು ಕೂಡ ಅಪರಾಧ. ಈ ಪ್ರವೃತ್ತಿಯನ್ನು ಲೈಂಗಿಕತೃಪ್ತಿಯ ಗೀಳು ಎಂದು ಕರೆಯಲಾಗುತ್ತದೆ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಮತ್ತು ಜುಲ್ಮಾನೆಯ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.