ಮಹಿಳೆಯರು
- Legal Explainers (3)
- Resources (1)
ಅಂತರ್ಜಾಲದಲ್ಲಿ ನಿಮ್ಮನ್ನು ಹಿಂಬಾಲಿಸುವುದು
ಮಹಿಳೆಯೊಬ್ಬರು ಬಳಸುತ್ತಿರುವ ಅಂತರ್ಜಾಲ ಇ-ಮೇಲ್ ಮತ್ತಾವುದೇ ರೀತಿಯ ವಿದ್ಯುನ್ಮಾನ ಸಂವಹನ ಸಾಮಾಜಿಕ ಜಾಲತಾಣಗಳು ಇವುಗಳ ಮೇಲೆ ಯಾವುದೇ ವ್ಯಕ್ತಿಯು ನಿಗಾ ವಹಿಸಿದ್ದಲ್ಲಿ, ಅದನ್ನು “ಅಂತರ್ಜಾಲ ಹಿಂಬಾಲಿಕೆ” (ಸೈಬರ್ ಸ್ಟಾಕಿಂಗ್) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬನು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಸಂಪರ್ಕಿಸುತ್ತಿದ್ದಲ್ಲಿ, ಆತ ನಿಮ್ಮನ್ನು ಅಂತರ್ಜಾಲದಲ್ಲಿ ಹಿಂಬಾಲಿಸುತಿದ್ದಾನೆ ಎಂದರ್ಥ. ಈ ಅಪರಾಧಕ್ಕಾಗಿ ಮೊದಲ ಬಾರಿ ತಪ್ಪಿತಸ್ಥನೆಂದು ಕಂಡುಬಂದಾಗ ಅಪರಾದಿಯು ಮೂರು ವರ್ಷಗಳ ಕಾರಾಗೃಹ ವಾಸ ಮತ್ತು ಜುಲ್ಮಾನೆ […]
ಅಶ್ಲೀಲ ಮಾಹಿತಿ ಮತ್ತು ಲೈಂಗಿಕ ದೌರ್ಜನ್ಯ
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನು ವಿವಿಧ ರೀತಿಯ ಅಪರಾಧಗಳನ್ನಾಗಿ ಪರಿಗಣಿಸಿ ದಂಡನೆ ವಿಧಿಸುತ್ತದೆ. ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು: ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಯಾವುದೇ ಮಹಿಳೆಯ ನಗ್ನಚಿತ್ರವನ್ನು ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅಂತಹ ಕೃತ್ಯ ಅಪರಾಧ. ಮೊದಲನೇ ಬಾರಿಯ ಇಂತಹ ಅಪರಾಧಕ್ಕೆ ಮೂರು ವರ್ಷಗಳವರೆಗೆ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ. ಪುನ: ಈ ರೀತಿಯ ಅಪರಾಧ ಎಸಗಿದಲ್ಲಿ, […]
ನಿಮ್ಮ ವೈಯುಕ್ತಿಕ ಭಾವಚಿತ್ರಗಳು ಮತ್ತು ವಿಡಿಯೋಗಳು
ನಿಮ್ಮ ವೈಯುಕ್ತಿಕ ಭಾವಚಿತ್ರಗಳ ಮತ್ತು ವಿಡಿಯೋಗಳನ್ನು ನಿಮ್ಮ ಅನುಮತಿ ಇಲ್ಲದೆಯೇ ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ಗುಪ್ತಾಂಗದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಹಾಕಿದಲ್ಲಿ ಅದು ಆತನ ಖಾಸಗಿತನವನ್ನು ಉಲ್ಲಂಘಿಸಿದ ಅಪರಾಧವೆನಿಸಿಕೊಳ್ಳುತ್ತದೆ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಎರಡು ಲಕ್ಷ ರೂಪಾಯಿಗಳ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ. ಮಹಿಳೆಯೊಬ್ಬಳು ಖಾಸಗಿ ಕ್ರಿಯೆಗಳಲ್ಲಿ ತೊಡಗಿರುವ ಭಾವಚಿತ್ರಗಳನ್ನು ತೆಗೆಯುವುದು, ನೋಡುವುದು ಅಥವಾ ಹರಡುವುದು ಕೂಡ ಅಪರಾಧ. ಈ […]